Skip to main content

Posts

Featured

ಸಪ್ತ ಸಾಗರದಾಚೆ ಎಲ್ಲೊ ♥️🌊🤞🏻

ಪ್ರಿಯಾ ಥರ ಹುಡ್ಗಿ ಇದ್ರೆ ಯಾವ್ ಹುಡ್ಗ ಆದ್ರೂ ಅವಳಿಗೋಸ್ಕರ ಮನು ಆಗಕ್ಕೆ ರೆಡಿ ಇರ್ತಾನೆ..! ಒಂದು ಬಡ ಕುಟುಂಬದಲ್ಲಿ ಬೆಳೆದಿರುವ simple ಹುಡ್ಗಿ ಪ್ರಿಯಾ, ಇರೋದ್ರಲ್ಲಿ ಖುಷಿಯಾಗಿ ಇರ್ಬೇಕು ಅಂತ ಬದುಕೋಳು. ಹಿಂದೆ ಮುಂದೆ ಯಾರು ಇಲ್ದೆ ಇರೋ ಅನಾಥ ಮನು. ಅವನಿಗೆ ಪ್ರಿಯಾ ನೆ ಎಲ್ಲ. ಪ್ರಿಯಾ ಒಂದ್ ಹತ್ರ, "ಮನು ನನ್ ಸಮುದ್ರ ನೀನು" ಅಂತ ಮುದ್ದಾಗಿ ಹೇಳ್ತಾಳೆ. ಮನು ಯಾವತ್ತೂ ಹೇಳಲ್ಲ ಆದ್ರೆ ಅವನಿಗೆ ಸಹ ಪ್ರಿಯಾ ನೆ ಅವನ ಸಮುದ್ರ. ಸಮುದ್ರ ನ ಸಿನಿಮಾದಲ್ಲಿ ಜಾಸ್ತಿ ತೋರ್ಸಿಲ್ಲ ಯಾಕಂದ್ರೆ ಪ್ರಿಯಾ ನೆ ಸಮುದ್ರ, she is always constantly present and she's just there!!! ಮನು ನದಿ ಇಲ್ಲಿ, ಸಮುದ್ರ ನ ಸೇರೋದು ಅವನ್ ಗುರಿ, ಆದರೆ ಆ ದಾರಿಯಲ್ಲಿ ಅವಳ ಕನ್ಸ್ ನ ಹೇಗಾದ್ರೂ ಮಾಡಿ ಈಡೇರ್ಸ್ಬೇಕು ಅಂತ ಕಷ್ಟ ಪಟ್ಟು ದುಡಿಯೋಕೆ ಮುಂದಾಗ್ತಾನೆ ಆದ್ರೆ ಅದಕ್ಕೆ ಎಷ್ಟ್ ದುಡ್ಡು ಬೇಕಾಗಬಹುದು ಅಂತ ಸಹ ಗೊತ್ತಿಲ್ದೆ ಇರೋ ಮುಗ್ಧ ಅವನು. ಸಮಾಜದಲ್ಲಿ ಮಧ್ಯಮ ವರ್ಗಕ್ಕೆ ಸೇರಿದ್ ಹಿಂದೆ ಮುಂದೆ ಯಾರು ಇಲ್ದೆ ಇರೋ ಅಂತವರು ಸಿಕ್ಬಿಟ್ಟರೆ ಅವರನ್ನ ಎಂಥಾ ಮಟ್ಟಕ್ಕೆ ಆದ್ರೂ ಉಪಯೋಗಿಸಿಕೊಳ್ಳಕ್ಕೆ ಮುಂದಾಗತಾರೇ ಅವರ ಆಸೆಗಳನ್ನ ಅವರ ಅಸ್ತ್ರಗಳನ್ನಾಗಿ ಮಾಡಿಕೊಂಡು. ಅದೇ ರೀತಿ ದುಡ್ಡಿನ ಆಸೆ ತೋರ್ಸಿ ಮನು ನ ಸೆಳೆದ ಅಂತಸ್ತು ಮರ್ಯಾದೆಗೆ ಕಟ್ಟು ಬಿದ್ದ ಜನ, ಅವರ ತಪ್ಪನ್ನ ಮುಚ್ಚಿ ಹಾಕೋಕೆ ಒಂದ್ ಬೆಲೆ ಕೊಟ್ಟು ಇನ್ಯಾರನ್ನೋ ಬಲಿ

Latest posts